ಕೊಚ್ಚಿ : ಅನ್ಯಾಯವಾದ ಅಡುಗೆ ಅನಿಲದ ಬೆಲೆ ಏರಿಕೆಗೆ ವಿರೋಧವಾಗಿ ಮೇ 6ರಂದು 24 ಗಂಟೆಗಳ ಕಾಲ ಹೋಟೆಲ್‌ಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲು ಕೇರಳ ಹೋಟೆಲ್ ಮತ್ತು ರೆಸ್ಟೋರಂಟ್ ಅಸೋಸಿಯೇಶನ್ ತೀರ್ಮಾನಿಸಿದೆ.
ಪ್ರಸ್ತುತ 993 ರೂಪಾಯಿ ಹೆಚ್ಚಿಸಲಾಗಿದೆ. ಕಳೆದ ಐದು ತಿಂಗಳ ಅವಧಿಯಲ್ಲಿ ಒಟ್ಟು 1498 ರೂಪಾಯಿ ಒಂದು ಸಿಲಿಂಡರ್ ಮೇಲೆ ಬೆಲೆ ಏರಿಕೆಯಾಗಿದೆ. ಆಹಾರ ಉತ್ಪಾದನೆ ಮತ್ತು ವಿತರಣಾ ಕ್ಷೇತ್ರಕ್ಕೆ ಯಾವುದೇ ರೀತಿಯಲ್ಲೂ ತಡೆಯಲಾಗದ ಪರಿಸ್ಥಿತಿ ಉಂಟಾಗಿದೆ. ಅಂಗಡಿ ಮುಚ್ಚುವಿಕೆಗೂ ಮುನ್ನ ಯುನಿಟ್/ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯಲಿವೆ. ಮೇ 6ರಂದು ಅಂಗಡಿಗಳನ್ನು ಮುಚ್ಚಿ ಜಿಲ್ಲಾ ಕೇಂದ್ರಗಳಿಗೂ ಹಾಗೂ ತೈಲ ಕಂಪನಿಗಳಿಗೂ ಪ್ರತಿಭಟನೆ ಮೆರವಣಿಗೆ ಮತ್ತು ಧರಣಿ ನಡೆಸಲಾಗುವುದು ಎಂದು ಕೇರಳ ಹೋಟೆಲ್ ಮತ್ತು ರೆಸ್ಟೋರಂಟ್ ಅಸೋಸಿಯೇಶನ್ ರಾಜ್ಯ ಅಧ್ಯಕ್ಷ ಜಿ. ಜಯಪಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಎನ್. ಅಬ್ದುಲ್ ರಜಾಕ್ ತಿಳಿಸಿದ್ದಾರೆ.

0 Comments
Await For Moderation ; Normally we don't allow Comments